ಕನ್ನಡದ ಹೊಸ ಹುಡುಗ ಹುಡುಗಿಯರಲ್ಲಿ  ಕವಿತೆ ಬರೆಯುವ ಖುಷಿ ತುಂಬಿ, ಬೆನ್ನು ತಟ್ಟಿ, ಬಹುಮಾನ ಕೊಟ್ಟು ತಾನೂ ಖುಷಿ ಕಂಡುಕೊಂಡ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಶ್ರೀನಿವಾಸರಾಜು ಮೇಷ್ಟ್ರು ಇಂದು ಬೆಳಿಗ್ಗೆ ಏಳು ಗಂಟೆಗೆ ಕುಪ್ಪಳ್ಳಿಗೆ ಹೋಗವ ದಾರಿಯಲ್ಲಿ ತೀರ್ಥಹಳ್ಳಿಯ ಬಸ್ಸು ನಿಲ್ದಾಣದ ಬಳಿ ಹೃದಯಾಘಾತದಿಂದ ತೀರಿಹೋದರು. ಕುಪ್ಪಳ್ಳಿಯಲ್ಲಿ ನಡೆಯುವ  ಬೇಂದ್ರೆ ಕಾವ್ಯ ಸಂಕಿರಣದಲ್ಲಿ ಭಾಗವಹಿಸಲು ಬೆಂಗಳೂರಿಂದ ಬಂದು, ಬಸ್ಸು ಇಳಿದು, ಹೋಟೆಲ್ ರೂಂ ಹುಡುಕುತ್ತಾ ನಡೆಯುತ್ತಿದ್ದರು.
ಸರಳ, ಸಜ್ಜನ, ಮಗುವಿನ ಪ್ರೀತಿಯ ರಾಜು ಮೇಷ್ಟರಿಗೆ ಕವಿತೆ ಓದುವ ಬರೆಯುವ ಎಲ್ಲರ ಪರವಾಗಿ ಇದೊಂದು ಹಳೆಯ ಕವಿತೆ
ಶ್ರೀನಿವಾಸ ರಾಜು ಮೇಷ್ಟರಿಗೆ ನಮಸ್ಕಾರ
ಬಹುಶಃ ಈಗಿನ ಹುಡುಗರಿಗೆ ಶ್ರೀನಿವಾಸರಾಜು ಮೇಷ್ಟರು ಸಿಗಲಿಕ್ಕಿಲ್ಲ.
ಮೇಷ್ಟರಿಗೆ ಹುಡುಗರೂ ಇರಲಿಕ್ಕಿಲ್ಲ.
ಇದು ಹಳಹಳಿಕೆಯೆಂದೇನೂ ಅನಿಸಬೇಕಾಗಿಲ್ಲ.
ಏಕೆಂದರೆ ಕವಿತೆ ಹುಚ್ಚು ಹಾದರಗಿತ್ತಿಯಂತಹ ಹೆಂಗಸು,ವಿಟನಂತಹ ಬೇಜವಾಬ್ಧಾರಿಯ ಗಂಡಸು,
ಹಾಗೆಲ್ಲಾಮೇಷ್ಟರ ಪಾಲಾಗುವುದಿಲ್ಲ ಅಂತ ನಾವೆಲ್ಲ ಸಜ್ಜನರ ಕಾಲೆಳೆಯಬೇಕಾಗಿಲ್ಲ.
ಏಕೆಂದರೆ ಸಜ್ಜನರು ಈಗಲೂ ಕಾಲವಾಗಿಲ್ಲ.
ಬಹುಶಃ ಇದನ್ನು ಸಮೀಕರಣದ ಮೂಲಕ ಹೀಗೂ ಹೇಳಬಹುದುಅಂತೆಲ್ಲ ಬಗೆಹರಿಸುತ್ತಿರಬೇಕಾದರೆ ನನಗೆ ನನ್ನನ್ನೇ ಒದೆಯಬೇಕೆನ್ನಿಸುತ್ತದೆ.
‘ಸುಮ್ಮನೇ ಮೇಷ್ಟರ ಕಾಲಬಳಿ ಕುಳಿತು ಅಥವಾ ಅವರ ಕೈ ತುತ್ತಿನಂತಹವಾತ್ಸಲ್ಯ ಉಂಡು ಯಾಕೆ ಬೆನ್ನು ತಡವಿಸಿಕೊಂಡು ಬರಲಾಗುತ್ತಿಲ್ಲ’
ಮೇಷ್ಟರು ನಮ್ಮನ್ನು ಬೈಯ್ಯಬಹುದಿತ್ತು,ಕಿಚಾಯಿಸಬಹುದಿತ್ತು,ವಿಮರ್ಶಿಸಬಹುದಿತ್ತು
- ಹಾಗೇನೂ ಮಾಡಲಿಲ್ಲ.
ಸುಮ್ಮನೇ ಸದ್ದು ಮಾಡದೇ ಸಪಾಟು ದಾರಿಯಲ್ಲಿ ನಡೆವಂತೆ ನಡೆದು
ಟೀ ಲೋಟ ಕೈಯಲ್ಲಿರುವಂತೆೆ ನಡೆದು
ಕವಿತೆ ಎದೆಯೊಳಗಿರುವಂತೆ ನಡೆದು
ಎಲ್ಲಿ ಹೆಜ್ಜೆ ಊರುವುದೋ ಎಂಬಂತೆ ನಡೆದುಪುಸ್ತಕಗಳ ಪ್ರಕಾಶಿಸಿದರು
ನನ್ನಂತಹ ಅರಿವುಗೆಟ್ಟವನ ಕವಿಯನ್ನಾಗಿಸಿದರು
ಒಮ್ಮೆ ಮೇಷ್ಟರಿಗೆ ನಮಸ್ಕಾರ ಮಾಡಲು ಮರೆತು ನನಗೆ ನನ್ನನ್ನೇ ಒದೆಯಬೇಕೆನ್ನಿಸಿತ್ತು.
ಆಗಲೂ ಶ್ರೀನಿವಾಸರಾಜು ಮೇಷ್ಟರು ಮಗುವಿನ ಹಾಗೆ ನಗುತ್ತಿದ್ದರು.
ಈಗಲೂ ನಗುತ್ತಿರುತ್ತಾರೆ.
ಅವರ ಮನೆಯೆದುರಿನ ಮಲ್ಲಿಗೆ ಬಳ್ಳಿ
ಕಾಮದೇನುವಿನ ಪರಿಮಳ!
ಬೆಂಗಳೂರಿನ ಬಸ್ಸು ಹತ್ತಿಕ್ರೈಸ್ಟ್ ಕಾಲೇಜಿನಿಂದ ಕವಿತೆಗೆ ಬಹುಮಾನ ಇಸಕೊಂಡು ಬರುವುದಿದೆಯಲ್ಲ
ಮೇಷ್ಟ್ರೆ ನೀವಿದ್ದರೆ ಹುಡುಗರಿಗೆ ಹೀಗೆಲ್ಲ ಕಾವ್ಯದ ಹಾಗೆ
ಗಿರಕಿ ಹೊಡೆಯಲು ಆಗುತ್ತದೆ.ನಿಮಗೆ ನಮಸ್ಕಾರ.